ನೀವು 3 ಸರಳ ಹೆಜ್ಜೆಗಳೊಂದಿಗೆ ಸ್ವಿಗ್ಗಿ ಸೇರಬಹುದಾಗಿದೆ ಆಪ್ ಡೌನ್ಲೋಡ್ ಮಾಡಿ ನಿಮ್ಮ ಪ್ರೋಫೈಲ್ ಅನ್ನು ಪೂರ್ಣಗೊಳಿಸಿ ಡಾಕ್ಯುಮೆಂಟ್ಸ್ ಅನ್ನು ಅಪ್ಲೋಡ್ ಮಾಡಿ ನಿಮ್ಮ ಯುನಿಫಾರ್ಮ್ ಹಾಗೂ ಬ್ಯಾಗ್ ಅನ್ನು ನಿಮ್ಮ ಮನೆಗೇ ಡೆಲಿವರ್ ಮಾಡಲಾಗುವುದು ಆರ್ಡರ್ಸ್ ಡೆಲಿವರ್ ಮಾಡಿ ಹಾಗೂ ಸ್ವಿಗ್ಗಿಯೊಂದಿಗೆ ಭಾರೀ ಗಳಿಕೆ ಮಾಡಿ
ಸ್ವಿಗ್ಗಿ ಸೇರಲು ನನಗೆ ಯಾವ ಯಾವ ಡಾಕ್ಯುಮೆಂಟ್ಸ್ ಹಾಗೂ ವಿವರಗಳ ಅಗತ್ಯವಿದೆ? ನಿಮಗೆ ಈ ಕೆಳಗಿನ ಡಾಕ್ಯುಮೆಂಟ್ಸ್ ಬೇಕಾಗುವುದು. ನಿಮ್ಮ ಬಳಿ ಈ ಡಾಕ್ಯುಮೆಂಟ್ಸ್ ಇರದೇ ಇದ್ದರೆ, ಚಿಂತಿಸಬೇಡಿ - ನೀವು ಅದನ್ನು ನಂತರ ನೀಡಬಹುದು. ಆಧಾರ್ ಕಾರ್ಡ್ ಅಥವಾ ವೋಟರ್ ಕಾರ್ಡ್ ಪಾನ್ ಕಾರ್ಡ್ ಡ್ರೈವಿಂಗ್ ಲೈಸನ್ಸ್ (ಸೈಕಲ್ ಗಾಗಿ ಬೇಕಾಗಿಲ್ಲ) ಬ್ಯಾಂಕ್ ಡೀಟೇಲ್ಸ್
ಆನ್ಬೋರ್ಡಿಂಗ್ ಶುಲ್ಕ ಸುಮಾರು ₹1500 ಮತ್ತು ಇದು ನಗರದಿಂದ ನಗರಕ್ಕೆ ಬದಲಾಗುತ್ತದೆ. ನಿಮ್ಮ ಆನ್‌ಬೋರ್ಡಿಂಗ್ ನಂತರ ಈ ಶುಲ್ಕವನ್ನು ಬಹು ಕಂತುಗಳಲ್ಲಿ ಕಡಿತಗೊಳಿಸಲಾಗುತ್ತದೆ.
ಸ್ವಿಗ್ಗಿ ನಿಮಗೆ ನಿಮ್ಮ ಶಿಫ್ಟ್ ಗಳನ್ನು ಆಯ್ದುಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯ ನೀಡುತ್ತದೆ. ನೀವು ನಿಮ್ಮ ಆದ್ಯತೆಯ ಮೇಲೆ ಅರೆಕಾಲಿಕ ಅಥವ ಪೂರ್ಣ ಅವಧಿಯ ಡೆಲಿವರಿ ಪಾರ್ಟ್ನರ್ ಆಗಬಹುದಾಗಿದೆ.
ನನ್ನ ಬಳಿ ಯಾವುದೇ ವಾಹನವಿಲ್ಲ. ಹೀಗಿರುವಾಗ ನಾನು ಡೆಲಿವರಿ ಪಾರ್ಟ್ನರ್ ಆಗಬಹುದೇ? ಹೌದು. ನೀವು ಒಂದು ಬೈಕ್/ಇ-ಬೈಕ್/ಸೈಕಲ್ ಅನ್ನು ಡೆಲಿವರೀಸ್ ಗಾಗಿ ಬಾಡಿಗೆಗೆ ಪಡೆಯಬಹುದು. ಸ್ವಿಗ್ಗಿ ನಿಮಗಾಗಿ ವಾಹನವನ್ನು ಲಭ್ಯವಾಗಿಸಲು ಮಾರಾಟಗಾರರನ್ನು ಸಂಪರ್ಕಿಸಲು ಸಹಾಯ ಮಾಡಬಹುದು. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಆನ್ಬೋರ್ಡಿಂಗ್ ಕೇಂದ್ರಕ್ಕೆ ಭೇಟಿ ನೀಡಿ.
ಸ್ವಿಗ್ಗಿ ಜೊತೆ ನಾವು ಎಷ್ಟು ಸಂಪಾದನೆ ಮಾಡಬಹುದಾಗಿದೆ? ಸ್ವಿಗ್ಗಿ ಜೊತೆಗಿನ ನಿಮ್ಮ ಸಂಪಾದನೆ ನಿಮ್ಮ ನಗರ ಹಾಗೂ ನೀವು ಡೆಲಿವರ್ ಮಾಡುವ ಆರ್ಡರ್ಸ್ ಸಂಖ್ಯೆಯನ್ನು ಅವಲಂಬಿಸುತ್ತದೆ. ನೀವು ಎಷ್ಟು ಸಂಪಾದನೆ ಮಾಡಬಹುದು ಎಂದು ತಿಳಿಯಲು ಆಪ್ ಅನ್ನು ಡೌನ್ಲೋಡ್ ಮಾಡಿ ಹಾಗೂ ನಿಮ್ಮ ವಿವರಗಳನ್ನು ತುಂಬಿಸಿ.
ಇದು ವಿತರಣಾ ಕೆಲಸವಲ್ಲ ಬದಲಿಗೆ ಇದು ನಿಮ್ಮ ಮತ್ತು ಸ್ವಿಗ್ಗಿ ನಡುವಿನ ಪಾವತಿಸಿದ ಪಾಲುದಾರಿಕೆಯಾಗಿದೆ, ಅಲ್ಲಿ ನೀವು ಪೂರ್ಣಗೊಳಿಸಿದ ಡೆಲಿವರಿ ಗಳ ಆಧಾರದ ಮೇಲೆ ನಿಮಗೆ ಪರಿಹಾರವನ್ನು ನೀಡಲಾಗುತ್ತದೆ. ನಿಮ್ಮ ಶಿಫ್ಟ್‌ಗಳನ್ನು ಆಯ್ಕೆ ಮಾಡಲು ಸ್ವಿಗ್ಗಿ ಸಂಪೂರ್ಣ ನಮ್ಯತೆಯನ್ನು ನೀಡುತ್ತದೆ. ನಿಮ್ಮ ಆದ್ಯತೆಯ ಆಧಾರದ ಮೇಲೆ ನೀವು ಅರೆಕಾಲಿಕ ಅಥವಾ ಪೂರ್ಣ ಸಮಯದ ಡೆಲಿವರಿ ಪಾರ್ಟ್ನರ್ ಆಗಬಹುದು.
ಸ್ವಿಗ್ಗಿ ನನಗೆ ಯಾವಾಗ ಮತ್ತು ಹೇಗೆ ಪಾವತಿಗಳನ್ನು ಮಾಡುತ್ತದೆ? ಸ್ವಿಗ್ಗಿ ಪ್ರತೀ ವಾರವು ನಿಮ್ಮ ಬ್ಯಾಂಕ್ ಅಕೌಂಟ್ ಗೆ ನಿಮ್ಮ ಸಂಪಾದನೆಯನ್ನು ವರ್ಗಾಯಿಸುತ್ತದೆ.
ಸ್ವಿಗ್ಗಿ ಸೇರಿದಾಗ ಸಿಗುವ ಇತರ ಲಾಭಗಳೇನು? ಸ್ವಿಗ್ಗಿ ನಿಮಗೆ ಹಾಗೂ ನಿಮ್ಮ ಪರಿವಾರಕ್ಕೆ 12 ಲಕ್ಷಗಳವರೆಗಿನ ಉನ್ನತ ದರ್ಜೆಯ ಇನ್ಶೂರೆನ್ಸ್, ನಿಮಗೆ ಹಾಗೂ ನಿಮ್ಮ ಮಕ್ಕಳಿಗೆ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು, ಸರಳ ವಯಕ್ತಿಕ ಸಾಲ, ವಾಹನ ನಿರ್ವಹಣೆ ಬೆಂಬಲ ಹಾಗೂ ಇನ್ನೂ ಹಲವು ಲಾಭಗಳನ್ನು ಒದಗಿಸುತ್ತದೆ. ಈ ಲಾಭಗಳನ್ನು ಪಡೇಯಲು ಆಪ್ ಡೌನ್ಲೋಡ್ ಮಾಡಿ ಹಾಗೂ ಸ್ವಿಗ್ಗಿ ಸೇರಿರಿ.